Home
"ಸಾರ್ವಜನಿಕ ಕುಂದುಕೊರತೆ ಸಹಾಯವಾಣಿ ಸಂಖ್ಯೆ :08536-267216"
ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2012 Click here for more Details
-----------------------------------------------------------------------------------------------------------------------------
-----------------------------------------------------------------------------------
|
2012-13ನೇ ಸಾಲಿನ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆಯಡಿ ಸಾಲಸೌಲಭ್ಯ |
||
![]() |
ಸಾರ್ವಜನಿಕ ಪ್ರಕಟಣೆ - “ಮಲ ಹೊರುವ ಪದ್ದತಿಯನ್ನು ನಿಷೇಧಿಸಿದೆ “ |
ಕುಷ್ಟಗಿ ಪಟ್ಟಣವು ಕೊಪ್ಪಳ ಜಿಲ್ಲೆಯಲ್ಲಿನ ಪ್ರಮುಖ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿ ವ್ಯವಸಾಯವೇ ಮುಖ್ಯ ಕಸುಬಾಗಿದ್ದು ಬಿಳಿಜೋಳ, ನೆಲಗಡಲೆ, ಹತ್ತಿ ಹಾಗೂ ಮೆಕ್ಕೆಜೋಳಗಳು ಪ್ರಮುಖ ವ್ಯವಸಾಯ ಉತ್ಪನ್ನಗಳಾಗಿವೆ. ಅಲ್ಲದೇ ತೋಟಗಾರಿಕಾ ಬೆಳೆಯಾದ ದಾಳಿಂಬೆ ಹಾಗೂ ಪಪ್ಪಾಯ ಹಣ್ಣುಗಳಿಗೆ ವಿದೇಶಗಳಲ್ಲಿ ಬೇಡಿಕೆಯಿರುತ್ತದೆ. ಇಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಾಗಿ ವಾಸಿಸುತ್ತಿದ್ದು ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದೆ. ಕುಷ್ಟಗಿ ಪೌರಸಂಸ್ಥೆಯು ಮೊಟ್ಟಮೊದಲು ಸನ್ 1968-69 ರಿಂದ 1984ರ ವರೆಗೆ ಪುರಸಭೆ ಹಾಗೂ 1986-87 ರಿಂದ 1995ರ ವರೆಗೆ ಮಂಡಲ ಪಂಚಾಯತ ಅಂತಲೂ ದಿನಾಂಕ: 09-01-1996 ರಿಂದ 17-01-2007ರ ವರೆಗೆ ಪಟ್ಟಣ ಪಂಚಾಯತ್‌ಯಾಗಿ ಪರಿವರ್ತನೆಯಾಯ್ತು. ಸನ್ 2001ರ ಜನಸಂಖ್ಯೆ ಆಧಾರದ ಪತ್ರ ಸಂಖ್ಯೆ: ಯುಡಿಡಿ.ಎಂ.ಎಲ್.ಆರ್.ಡಿ. ಬೆಂಗಳೂರು ರವರ ಆದೇಶಾನುಸಾರ ದಿನಾಂಕ: 17-01-2007 ರಿಂದ ಪುರಸಭೆಯಾಗಿ ಪರಿವರ್ತನೆಯಾಗಿದೆ. 2001ನೇ ಜನಗಣತಿಯ ಪ್ರಕಾರ ಕುಷ್ಟಗಿ ಪಟ್ಟಣದ ಜನಸಂಖ್ಯೆ 21,180 ಮತ್ತು ಒಟ್ಟು ವಿಸ್ತಾರ 12.6 ಚ.ಕಿ.ಮೀ. ಇರುತ್ತದೆ. ಸದ್ಯ 2011ರ ಜನಗಣತಿ ಪ್ರಕಾರ ಜನಸಂಖ್ಯೆ 24,890 ಇರುತ್ತದೆ. ಜಿಲ್ಲಾ ಕೇಂದ್ರವಾದ ಕೊಪ್ಪಳದಿಂದ 50ಕಿ.ಮೀ. ದೂರದಲ್ಲಿದ್ದು ರಸ್ತೆ ಪ್ರಮುಖ ಸಂಪರ್ಕಸಾಧನವಾಗಿದೆ. ಕುಷ್ಟಗಿ ಪಟ್ಟಣದ ವ್ಯಾಪ್ತಿಯಲ್ಲಿ 23 ವಾರ್ಡಗಳಿದ್ದು 7500 ಮನೆಗಳು ಹಾಗೂ 450 ಸಂಖ್ಯೆಯ ವಾಣಿಜ್ಯ ಮಳಿಗೆಗಳಿವೆ. ಕುಷ್ಟಗಿ ಪಟ್ಟಣದ ವಾರ್ಷಿಕ ಮಳೆಯ ಪ್ರಮಾಣ 40ಸೆಂ.ಮೀ. ಇದ್ದು ಉಷ್ಣಾಂಶ ಕನಿಷ್ಠ 20ಸೆಗ್ರೆ ಗರಿಷ್ಠ 40ಸೆಗ್ರೆ ಇರುವುದು.
-----------------------------------------------------------------------------------------
ಗಣಕೀಕರಣ: ಕುಷ್ಟಗಿ ಪುರಸಭೆಯು 1999 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತ ಗೊಳಿಸಿದ್ದು ನಾಗರೀಕರು ಇನ್ನು ಮುಂದೆ ಜನನ ಮರಣ ಪತ್ರಗಳನ್ನು ಸೇವಾಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ ಹಾಗೂ ಇದರ ಬಳಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.
ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ತಿಳಿಯಬಹುದು - ಇಲ್ಲಿ ಕ್ಲಿಕ್ ಮಾಡಿ
ಸಾರ್ವಜನಿಕ ದೂರು ನಿವಾರಣಾ ಕೇಂದ್ರ(Public Grievance Redressal System (P.G.R)): ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಕಾರ್ಯನಿರ್ವಹಿಸುತ್ತಿರುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ಸಹಾಯವಾಣಿ ಸಂಖ್ಯೆ:08536-267216.
ಸಾರ್ವಜನಿಕರು ತಮ್ಮ ದೂರುಗಳನ್ನು ಆನ್‌ಲೈನ್ ಮೂಲಕ ದಾಖಲಿಸಬಹುದು - ಇಲ್ಲಿ ಕ್ಲಿಕ್ ಮಾಡಿ
-----------------------------------------------------------------------------------------
ಸ್ಥಳೀಯ ಸಂಸ್ಥೆಯ ವೆಬ್ ಸೈಟ್: ಕುಷ್ಟಗಿ ಪುರಸಭೆಯ ಅಧಿಕೃತ ಅಂತರ್ಜಾಲ www.kustagitown.gov.in ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಇದರ ಮೂಲಕ ಪಡೆದುಕೊಳ್ಳಬಹುದು.
---------------------------------------------------------------------------------------------
ಪುರಸಭೆಯ ಪ್ರಮುಖ ಧ್ಯೇಯೋದ್ದೇಶಗಳು ಈ ಕೆಳಕಂಡಂತಿರುತ್ತವೆ.
- ಪಟ್ಟಣದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
- ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವುದು.
- ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರಿನ ಸಂಪರ್ಕ ಒದಗಿಸುವುದು.
- ಸಾರ್ವಜನಿಕರ ಆರೋಗ್ಯ ,ನೈರ್ಮಲ್ಯ ಕಾಪಾಡುವುದು.
- ಪಟ್ಟಣದಲ್ಲಿ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
- ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇವಾರಿ.
- ಪಟ್ಟಣ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ನಗರದ ಬಡತನ ನಿವಾರಣೆ.
- ಬೀದಿ ದೀಪ,, ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯಗಳಂತ ಮೂಲ ಸೌಕರ್ಯಗಳನ್ನು ಒದಗಿಸುವುದು.
- ಸ್ಮಶಾನ ಮತ್ತು ಸ್ಮಶಾನ ಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು.
- ಜನನ-ಮರಣ ನೊಂದಣಿಯು ಸೇರಿದಂತೆ ಮುಖ್ಯವಾದ ಜನನ ಮತ್ತು ಮರಣ ಅಂಕಿ ಅಂಶಗಳನ್ನು ಒದಗಿಸುವುದು.
- ಕಸಾಯಿ ಖಾನೆಗಳ ನಿಯಂತ್ರಣ.
- ಆಸ್ತಿ ತೆರಿಗೆ, ಜಾಹಿರಾತು ತೆರಿಗೆ ಮತ್ತಿತರ ಶುಲ್ಕಗಳ ವಸೂಲಾತಿಯ ಮೇಲ್ವಿಚಾರಣೆ.
- ರಸ್ತೆ ಮತ್ತು ಬೀದಿ ದೀಪಗಳ ದುರಸ್ಥಿ ಮತ್ತು ನಿರ್ವಹಣೆ.
- ಅಪಾಯಕಾರಿ ರೋಗಗಳ ನಿಯಂತ್ರಣ.
ಇವುಗಳು ನಮ್ಮ ಸ್ಥಳೀಯ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳಾಗಿದ್ದು ಸ್ಥಳೀಯ ಸಂಸ್ಥೆಯು ಸಾರ್ವಜನಿಕ ಸೌಲಭ್ಯ ರಚನೆ ಮತ್ತು ನಿರ್ವಹಣೆಯಲ್ಲಿ ಸದಾ ತೊಡಗಿರುತ್ತದೆ
---------------------------------------------------------------------------------------------------
ಕುಷ್ಟಗಿ ಪಟ್ಟಣದ ಸಮಸ್ತ ಆಸ್ತಿಯ ಮಾಲಿಕರುಗಳಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ, ಭೂ ಬಾಡಿಗೆ, ಲೈಸನ್ಸ್ ಫೀ, ಮಳಿಗೆ ಬಾಡಿಗೆ, ಹಳೆಯ ಘರಪಟ್ಟಿ, ಅಭಿವೃಧ್ಧಿ ಕರ ಇತ್ಯಾದಿ ಕರಗಳನ್ನು ಪುರಸಭೆಗೆ ಕೂಡಲೇ ಭರಣಾ ಮಾಡಿ ಪಟ್ಟಣದ ಅಭಿವೃಧ್ಧಿ ಕಾರ್ಯಗಳಿಗೆ ಸಹಕರಿಸಲು ಈ ಮೂಲಕ ವಿನಂತಿಸಿದೆ.
-----------------------------------------------------------------------------------------------------
This page is maintained by B N Muniswami Chief Officer TMC, Kushtagi. Last updation date:30/04/2012


